ಈ ಎಮ್ಮೆನ್ನೆಸ್ ನವರು ಮೊನ್ನೆ ಅಬು ಅಜ್ಮಿ ವಿಷಯದಲ್ಲಿ ಸಿಕ್ಕಿ ಹಾಕಿಕೊಂಡ್ರು. ಅದಿನ್ನೂ ತಣ್ಣಗಾಗಿಲ್ಲ, ಆಗ್ಲೇ ಠಾಕ್ರೆ ಅದೇ ಧಾಟಿಯಲ್ಲಿ ಸಚಿನ್ ವಿಷಯದಲ್ಲಿ ವಿವಾದ ಹುಟ್ಟಿಸಿದ್ದಾರೆ. ಸಚಿನ್ ಹೇಳಿದ್ರಲ್ಲಿ ತಪ್ಪೇನು ಇಲ್ಲ ಅಂತಾ ಶಿವಸೇನೇನಾ ಜನಾ ಹಿಗ್ಗಾಮುಗ್ಗಾ ತರಾಟೆಗೆ ತಗೊಂಡಿದ್ದಾರೆ. ಇದೆಲ್ಲಾ ನೋಡುತ್ತಿದ್ದಾಗ ಕಳೆದ ಶುಕ್ರವಾರ ಬೋರಿಯಾ ಮಂಜುಮ್ದಾರ್ ಬರೆದ ಈ ಲೇಖನ ನೆನಪಾಯ್ತು...

The League Of One

Boria Majumdar

As Sachin Tendulkar completes 20 years in international cricket on Sunday, it is time to go beyond cricketscape to fully comprehend his contribution to India’s sporting history. Sir Donald Bradman too had played international cricket for nearly two decades between 1929 and 1948. However, with not more than a handful of Test matches scheduled per year and with no
ODIs and T-20 matches cramping the cricket calendar then, let alone the IPL, his body hadn’t endured half of what Sachin’s has. This statistic coupled with the pressure of a billion expectations that Sachin has played under in each of his 159 Tests and 435 ODIs makes him the greatest-ever sportsman to have played the game.
In fact, it is now passe to suggest that Sachin is India’s greatest-ever cricketer. Rather, it is time to step up the comparison and compare him with the world’s greatest, to come to terms with his place in the global sporting pantheon.
At a time when Sachin emerged on the international scene in 1989, India was gradually falling prey to escalating international and domestic
tensions. Kashmir was on the boil, ULFA was eating into the edifice of Assam and the demand for Gorkhaland was gathering momentum in Bengal. It wouldn’t be wrong to say that our democracy was at risk and the concept of Indianness was being threatened by secessionists and insurgents.
In this atmosphere of growing political instability, Sachin emerged, someone who helped us feel uniquely Indian everytime he stepped out into the middle to espouse the national sporting cause. Be it at the Eden Gardens in Kolkata, at the Kotla in Delhi or at
Chepauk in Chennai – or indeed any stadium in this country – he was always greeted with the same intensity and cheer. He helped carve out a truly pan-Indian imagined community.
It is this singular contribution that places him on the same pedestal as a Jackie Robinson or a Jesse Owens. While Robinson’s breaking the colour line in 1947 justly continues to be hailed as a huge breakthrough in major league baseball and went a long way to address the race issue in America, Owens standing up against the Nazi might in 1936 remains a significant sporting fairytale. His achievement helped in giving coloured sportspersons

a respectability they had craved for years.
Sachin’s case is somewhat similar. Just as the nation was reeling under the impact of the Mumbai terror attacks and needed something to lift the collective national spirit, Sachin scored a match-winning fourth innings century at Chennai against the English in December 2008. His determination to do it “for India” was sure to rub off on every Indian sports fan. His gesture of dedicating the century to the memory of the victims of 26/11 did much to elevate Indian sport to a different level. He provided a salve
for a troubled nation.
Sachin’s innings of 136 against Pakistan at Chennai in 1999, while suffering from severe back pain, was a pointer to his dedication to playing for the nation’s cause. Kargil wasn’t a far-away memory. The resilience and the will to fight were what we most wanted to see in our icons. Striving for success for the country at times of adversity while enduring maximum pain was the best message Sachin could offer his fellow citizens. If Chennai 1999 ended in tragedy, with India losing the match by a meagre 12 runs, Centurion, South Africa, in March 2003 marked a spectacular resurgence.
In one of the most intensely
fought World Cup encounters in the history of the competition, India triumphed over Pakistan thanks to Sachin’s 78-ball 98. The impact was such that he was worshipped across the country alongside Lord Shiva on Shivratri.
Sachin’s aura isn’t restricted to Indians at home. In the ever-growing Indian diaspora, Indian professionals will inevitably have a desktop scorecard open on their computer monitors every time Sachin steps out to bat. It is an instant connect with things Indian that helps unite the diverse but powerful Indian community in the West.
While we can compare Sachin with legends like Nadia Commaneci, or more recently Usain Bolt, it is important to remember that Sachin is mem
ber of a collective and for a large part of his career has had to wage his battle with a mediocre team behind him. While Shane Warne had a Glenn McGrath or a Jason Gillespie to back him all through his career, Sachin, for most of the 1990s, was India’s only answer to the best that world cricket hurled at us. For those who still need convincing of his stature as India’s best-ever cricketer, his stay at the top of world cricket for 20 long years is the answer. Two long decades at the helm of international cricket, and still counting.
The writer is a sports historian.
(Courtesy: Times of india)


ಇಷ್ಟನೇ ಇಸವಿಯಿಂದ ಇಷ್ಟನೇ ಇಸವಿಯ ವರೆಗೆ ಒಬ್ಬ ರಾಜ ಆಳಿದ್ದ. ಅವನ ಕಾಲದ ರಾಜಕೀಯ, ಸಾಮಾಜಿಕ ಸಾಧನೆ. ಅವನ ಕಾಲದ ಕಲೆ ಇತ್ಯಾದಿಗಳಷ್ಟೇ ನಮ್ಮ ಇತಿಹಾಸ. ಈ ಚರಿತ್ರೆಯಲ್ಲಿ ಸಾಮಾನ್ಯನೊಬ್ಬ ಕಾಣಿಸುವುದೇ ಇಲ್ಲ. ಇದನ್ನು ದಾಖಲಿಸಿದವರು, ಅವರ ಮಿತಿಗಳು, ಸಂದರ್ಭಗಳು ಇತ್ಯಾದಿಗಳೆಲ್ಲಾ ಹಲವು ವೇದಿಕೆಗಳಲ್ಲಿ ಚರ್ಚೆಯಾಗುತ್ತಿವೆ. ಹಾಗಾಗಿಯೇ ಚರಿತ್ರೆ ಮರುರಚನೆಯ ಮಾತುಗಳು ಗಟ್ಟಿಯಾಗುತ್ತಿವೆ.ಇಂಥ ಹೊತ್ತಲ್ಲೇ ಎಡುವಾರ್ಡೊ ಗಲಿಯಾನೋ ಪರಿಚಯವಾಗಿದ್ದು. `ಬೆಂಕಿಯ ನೆನಪು' (ಕೆ.ಪಿ.ಸುರೇಶ್ ಕನ್ನಡಕ್ಕೆ ಅನುವಾದಿಸಿದ್ದಾರೆ) ಅಕ್ಷರಗಳಲ್ಲಿ ಕಟ್ಟಿಕೊಟ್ಟ ಲ್ಯಾಟಿನ್ ಅಮೆರಿಕದ ಲೇಖಕ ಈತ. `ನಾನೊಬ್ಬ ಇತಿಹಾಸಕಾರನಲ್ಲ. ಆದರೆ ನೆನಪಿಸಿಕೊಳ್ಳುವುದು ನನ್ನ ವ್ಯಾಮೋಹ' ಎನ್ನುತ್ತಾ ಲ್ಯಾಟಿನ್ ಅಮೆರಿಕದ ಹೊಸ ಸ್ಮೃತಿಯನ್ನು ಹೆಕ್ಕಿ ತೆಗೆಯುತ್ತಿರುವ ಪತ್ರಕರ್ತ.ಇತ್ತೀಚೆಗೆ ಈತನ ಮತ್ತೊಂದು ನೆನಪಿನ ಪುಸ್ತಕ ಬಿಡುಗಡೆಯಾಗಿದೆ. ಹೆಸರು `ಮಿರರ್ಸ್: ಸ್ಟೋರಿಸ್ ಆಫ್ ಆಲ್ಮೋಸ್ಟ್ ಎವರಿ ಒನ್'. ಮೊನ್ನೆ ಅಮೆರಿಕದ ಸಭೆಯೊಂದರಲ್ಲಿ ವೆನಿಜುವೆಲಾದ ಅಧ್ಯಕ್ಷ ಚಾವೆಜ್ ಬರಾಕ್ ಒಬಾಮಾಗೆ ಈ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದೇ ತಡ, ಎರಡೇ ದಿನದಲ್ಲಿ ಈ ಪುಸ್ತಕದ 54295 ಪ್ರತಿಗಳು ಮಾರಾಟವಾಗಿ ಹೋದವು.ಒಬಾಮಾಗೆ ಚಾವೆಜ್ ಈ ಪುಸ್ತಕ ನೀಡುತ್ತಾ, "This book is a monument in our Latin American history. It allows us to learn history, and we have to build on this history" ಎಂದು ಹೇಳಿದ್ದಾರೆ.
*****
ವರ್ಷಗಳ ಹಿಂದೆ ನಾನು ಬೆಂಕಿಯ ನೆನಪು ಓದಿದ್ದು. ಗಲಿಯಾನೋ ಬಗ್ಗೆ ಹೆಚ್ಚು ತಿಳಿಯುವ ಕುತೂಹಲಕ್ಕೆ ಸಾಕಷ್ಟು ಹುಡುಕಾಡಿ ಸುಮ್ಮನಾಗಿದ್ದೆ. `ಮಿರರ್ಸ್' ಬಿಡುಗಡೆಯಾಗಿದೆ ಎಂದು ತಿಳಿದ ಮೇಲೆ ಸುಮ್ಮನೆ ಇಂಟರ್ನೆಟ್ ಹೊಟ್ಟೆ ಜಾಲಾಡಿದ ಮೇಲೆ ಏನೇನೋ ಸಿಕ್ಕು ಖುಷಿಯಾಗಿದ್ದೇನೆ.ಆ ಹುಡುಕಾಟದಲ್ಲಿ ಮೊದಲನೆಯ ಕುತೂಹಲ `ಮಿರರ್ಸ್ನಲ್ಲಿ ಏನಿದೆ?' ಎಂಬುದು..ಮಿರರ್ಸ್ನಲ್ಲಿ 5 ಶತಮಾನಗಳ ಲ್ಯಾಟಿನ್ ಅಮೆರಿಕದ ಮೇಲೆ ಅನ್ಯದೇಶಿಯರು ನಡೆಸಿದ ದಬ್ಬಾಳಿಕೆಯ ಇತಿಹಾಸವಿದೆ. ಈ ಇತಿಹಾಸ ಸಾಮಾನ್ಯರದ್ದು. ಅದನ್ನೇ ಪುಸ್ತಕ ಶೀಷರ್ಿಕೆಯಲ್ಲೇ ಗಲಿಯಾನೋ ಹೇಳಿದ್ದಾರೆ `ಸ್ಟೋರಿಸ್ ಆಫ್ ಆಲ್ಮೋಸ್ಟ್ ಎವರಿ ಒನ್' ಅಂತಾ.`ಕಡಮೆ ಪದಗಳಲ್ಲಿ ಹೆಚ್ಚು ಹೇಳಬೇಕೆನ್ನುವ' ನಿಲುವು ಗಲಿಯಾನದ್ದೋ. ಮಿರರ್ಸ್ನಲ್ಲೂ ಪುಟ್ಟ ವಿವರಗಳಲ್ಲಿ ಲ್ಯಾಟಿನ್ ಅಮೆರಿಕದ ದಟ್ಟ ಇತಿಹಾಸವನ್ನು ತೀವ್ರವಾಗಿ ತಟ್ಟುವಂತೆ ಬಿಚ್ಚಿಟ್ಟ ಹಾಗಿದೆ. ಇಂಟನರ್ೆಟ್ನಲ್ಲಿ ಸಿಕ್ಕ ಪುಸ್ತಕದ ಆಯ್ದ ಭಾಗಗಳ ಅನುವಾದವನ್ನು ಇಲ್ಲಿ ಕೊಟ್ಟಿದ್ದೀನಿ...ಜತೆಗೆ 18 ನಿಮಿಷಗಳ ಸಂದರ್ಶನದ ಲಿಂಕ್ ಕೂಡ ಇದೆ. ಬಿಡುವು ಮಾಡಿಕೊಂಡು ಕೇಳಿ.
******
ಕಳೆದು ಸಿಕ್ಕದ್ದು...
ಶಾಂತಿ, ನ್ಯಾಯದ ಘೋಷಣೆಗಳೊಂದಿಗೆ ತಲೆ ಎತ್ತಿದ 20ನೇ ಶತಮಾನ ರಕ್ತಸಿಕ್ತವಾಗಿ ಸತ್ತು ಹೋಯಿತು. ಆನುವಂಶಿಕವಾಗಿ ಬಂದಿದ್ದಕ್ಕಿಂತ ಹೆಚ್ಚು ಅನ್ಯಾಯದಿಂದ ಜಗತ್ತನ್ನು ಹಾದುಹೋಗಿದೆ.21ನೇ ಶತಮಾನವೂ ಅಷ್ಟೇ. ಶಾಂತಿ, ನ್ಯಾಯ ಎನ್ನುತ್ತಲೇ ಬಂದಿತು; ಪೂವರ್ಿಕ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ..ಈ ಭೂಮಿಯಲ್ಲಿ ಅಡ್ಡದಾರಿ ಹಿಡಿದರೇ ಅದು ಚಂದ್ರನಲ್ಲೇ ಅಂತ್ಯ ಕಾಣುತ್ತದೆಂದು ಬಾಲ್ಯದಲ್ಲಿ ಕೇಳುತ್ತಿದ್ದೆ. ಆದರೆ ಗಗನಯಾನಿಗಳಿಗೆ ಮಾತ್ರ ದುಃಸ್ವಪ್ನವಾಗಲಿ, ಮುರಿದ ಭಾಷೆಗಳು, ತಿರಸ್ಕೃತ ಭರವಸೆಗಳ ಲಕ್ಷಣಗಳೇ ಸಿಗಲಿಲ್ಲ.ಚಂದ್ರನ ಮೇಲೆ ಸಿಗದೇ ಇದ್ದ ಮೇಲೆ, ಇನ್ನೆಲ್ಲಿರಬಹುದು?ಬಹುಶಃ ಅವುಗಳ ಅದಲು ಬದಲುಲಾಗಿರಲು ಸಾಧ್ಯವಿಲ್ಲ.ಬಹುಶಃ ಇಲ್ಲೇ ಭೂಮಿಯೊಡಲಲ್ಲಿರಬಹುದು. ಕಾಯುತ್ತಾ...
*******
ಯಾಂಗೊ
ಜಿಪ್ಸಿ ಕಾರಾವಾನಿನಲ್ಲಿ ಹುಟ್ಟಿ, ಬೆಲ್ಜಿಯಂ ರಸ್ತೆಗಳಲ್ಲಿ ವರ್ಷಗಳನ್ನು ಕಳೆದ. ಕರಡಿ, ಮೇಕೆಗಳ ಜತೆ ಬಾನ್ಯೋ (ಗಿಟಾರ್ ಮಾದರಿಯ ಆಫ್ರಿಕನ್ ತಂತಿ ವಾದ್ಯ) ನುಡಿಸುತ್ತಾ ಕಾಲ ಕಳೆದ. 18ನೇ ವರ್ಷ. ತಾನು ಸಂಚರಿಸುತ್ತಿದ್ದ ಬೋಗಿಗೆ ಬೆಂಕಿ ಬಿದ್ದು ಸಾಯುವ ಹಂತ ತಲುಪಿದ. ಕಾಲ ಕಳೆದುಕೊಂಡ. ಕೈಯೂ..ಅಲ್ಲಿಗೆ ರಸ್ತೆಗೆ ವಿದಾಯ. ಸಂಗೀತಕ್ಕೂ ವಿದಾಯಅವರು ಕೃತಕ ಕಾಲು ಒದಗಿಸಿದರು. ಅವನ ಕಳೆದುಕೊಂಡ ಕೈಯಲ್ಲಿ ಎರಡು ಬೆರಳುಗಳು ಮಾತ್ರ ಉಳಿದಿದ್ದವು. ಆತ ಇತಿಹಾಸ ಅಪ್ರತಿಮ ಝಾಜ್ ಗಿಟಾರ್ ವಾದಕನಾದ.ಯಾಂಗೋ ಮತ್ತು ಅವನ ಗಿಟೀರನ ನಡುವೆ ರಹಸ್ಯವಾದ ಒಪ್ಪಂದವಿತ್ತು. ಗಿಟಾರ್ ನುಡಿಸಲು ಆರಂಭಿಸುತ್ತಿದ್ದಂತೆ ಕಳೆದುಕೊಂಡು ಎರಡು ಬೆರಳುಗಳನ್ನು ಅದು ನೀಡುತ್ತಿತ್ತು!!
*******
ಆಧುನಿಕಲೆಯ ಉಗಮ
ಪಶ್ಚಿಮ ಆಫ್ರಿಕಾದ ಶಿಲ್ಪಿಗಳು ಕೆಲಸ ಮಾಡುವಾಗ ಹಾಡುತ್ತಿದ್ದರು. ಕೆತ್ತನೆ ಮುಗಿಯುವವರೆಗೆ ಹಾಡು ನಿಲ್ಲಿಸುತ್ತಿರಲಿಲ್ಲ. ಹೀಗೆ ಆ ಶಿಲ್ಪದಲ್ಲಿ ಸಂಗೀತೇ ಸೇರಿ ಅದೂ ಸದಾ ಹಾಡುತ್ತಿತ್ತು. 1910 ಲಿಯಾ ಫ್ರೆಬೆನಿಯಸ್ಗೆ ಸ್ಲೇವ್ ಕರಾವಳಿಯ ಬಳಿ ಪುರಾತನ ಶಿಲ್ಪ ಒಂದು ಸಿಕ್ಕಿತು. ಅದರ ಕಣ್ಣು ಊದಿಕೊಂಡಿದ್ದವು. ಅವುಗಳ ಸೌಂದರ್ಯ ನೋಡಿದ ಜರ್ಮನ್ ಸಂಶೋಧಕರು ಅವು ಗ್ರೀಕ್ನವೆಂದು, ಅಥೆನ್ಸ್ನಿಂದ ತಂದವೆಂದು, ಅಥವಾ ಅಟ್ಲಾಂಟಿಸ್ನಲ್ಲಿ ಕಾಣೆಯಾಗಿದ್ದವೆಂದು ಹೇಳಿದರು. ಸಹೋದ್ಯೋಗಿಗಳು ಹೀಗಂದರು:`ನಿಜ, ತಿರಸ್ಕೃತರ ಮಗಳು, ಗುಲಾಮರ ತಾಯಿ ಆಫ್ರಿಕಾ ಇಂಥ ಅದ್ಭುತವನ್ನು ಸೃಷ್ಟಿ ಮಾಡಿರಲಾರದು'ಆದರೆ, ಮಾಡಿದೆ. ಯೊರುಬ ದೇವ ಗಂಡು ಹೆಣ್ಣಿಗೆ ಜನ್ಮ ನೀಡಿದ ಪವಿತ್ರ ಸ್ಥಳ, ಜಗತ್ತಿನ ಹೊಕ್ಕುಳು ಐಫ್ನಲ್ಲಿ ಶತಮಾನಗಳ ಹಿಂದೆಯೇ ಸಂಗೀತ ತುಂಬಿದ ಪ್ರತಿಮೆಗಳು ಕೆತ್ತಲಾಗಿತ್ತು. ಆಫ್ರಿಕಾ ಅಂತ್ಯವೇ ಇಲ್ಲದ ಅಗಾಧ ಕಲೆಯ ಸಂಪನ್ಮೂಲ. ಆರಾಧಿಸುವುದಕ್ಕೆ, ಹಾಗೆಯೇ ಕದಿಯುವುದಕ್ಕೆ.ಅನ್ಯಮನಸ್ಕ ಪಾಲ್ ಗಾಗಿನ್ ಕಾಂಗೋದಿಂದ ಒಯ್ದ ಕೆಲ ಪ್ರತಿಮೆಗಳ ಮೇಲೆ ತನ್ನ ಹೆಸರನ್ನು ಕೆತ್ತಿಟ್ಟ. ಈತ ಮಾಡಿದ ತಪ್ಪು ಸಾಂಕ್ರಾಮಿಕವಾಯ್ತು. ಆಮೇಲೆ ಪಿಕಾಸೋ, ಮೋಡಿಲಿಯಾನಿ, ಕ್ಲೀ, ಗಿಯಾಕಮೆಟ್ಟಿ, ಅನರ್ೆಸ್ಟ್, ಮೂರ್ ಇನ್ನೂ ಅನೇಕ ಯುರೋಪಿಯನ್ ಕಲಾವಿದರು ಈ ತಪ್ಪನ್ನು ಅನುಸರಿಸಿದರು. ನಿರಂತವಾಗಿ ಮಾಡುತ್ತಲೇ ಇದ್ದರು. 20ನೇ ಶತಮಾನದ ಯುರೋಪಿನ್ ಚಿತ್ರ ಮತ್ತು ಶಿಲ್ಪಕಲೆಯ ಸಾಧನೆಗಳಿಗೆ ತನ್ನನ್ನು ಕೊಳ್ಳೆ ಹೊಡೆದ ವಸಾಹತುಷಾಹಿಗಳು ಎಷ್ಟು ಜವಾಬ್ದಾರರು ಎಂಬುದು ಆಫ್ರಿಕಾಕ್ಕೆ ಗೊತ್ತೇ ಆಗಿಲ್ಲ.
******
ಅಪರಾಧಶಾಸ್ತ್ರ
ಪ್ರತಿ ವರ್ಷ 30 ಲಕ್ಷ ರೈತರು ರಾಸಾಯನಿಕ ಕ್ರಿಮೀನಾಶಕಗಳಿಂದ ಸಾಯುತ್ತಾರೆ.ಪ್ರತಿ ದಿನ ಕರ್ತವ್ಯದ ವೇಳೆ ಸಂಭವಿಸುವ ಅಪಘಾತದಲ್ಲಿ 10ಸಾವಿರ ಕಾಮರ್ಿಕರು ಸಾಯುತ್ತಾರೆ.ಪ್ರತಿ ನಿಮಿಷ ಬಡತನ ಹತ್ತು ಮಕ್ಕಳನ್ನು ಕೊಲ್ಲುತ್ತದೆ.ಇವು ಸುದ್ದಿಯಾಗುವುದಿಲ್ಲ. ಇವು ಯುದ್ಧದಂತೆ, ನರಬಲಿಯ ಸಾಮಾನ್ಯ ಕೃತ್ಯಗಳು!ಅಪರಾಧಿಗಳು ನಿರಾತಂಕವಾಗಿದ್ದಾರೆ. ಸಾವಿರಾರು ಮಂದಿ ಕೊಲ್ಲುತ್ತಿರುವವರಿಗೆ ಸೆರೆಮನೆಯಿಲ್ಲ. ಬಡವರಿಗೆ ಮಾತ್ರೆ ಸೆರೆಮನೆ.ಥಾಮಸ್ ಪೈನೆ `ಬಡವರಲ್ಲದೆ ಬೇರೆಯವರು, ಶಿಕ್ಷೆಗೆ ಗುರಿಯಾಗುವುದಿಲ್ಲ' ಎಂದು ಎರಡು ಶತಮಾನಗಳ ಹಿಂದೆ ಆಶ್ಚರ್ಯವ್ಯಕ್ತಪಡಿಸಿದ್ದ.
******
ಒಗಟು
ನಮ್ಮ ಕುಟುಂಬದ ಪ್ರಮುಖ ಸದಸ್ಯರು ಅವರುಅವರು ಹೊಟ್ಟೆಬಾಕರು, ಅನಿಲ, ತೈಲ, ಕಬ್ಬು, ಧಾನ್ಯ ಅವರ ದಾರಿಯಲ್ಲಿ ಬಂದಿದ್ದನ್ನೆಲ್ಲಾ ನುಂಗುತ್ತಾರೆ.ಅವರಿಗೆ ಸ್ನಾನ ಮಾಡಿಸುವುದು, ಉಣಿಸುವುದು, ಸೂರು ನೀಡುವುದು, ಅವರ ಬಗ್ಗೆ ಮಾತಾಡುವುದು, ಅವರಿಗೆ ದಾರಿ ತೋರುವುದು: ಅವರು ನಮ್ಮ ಕಾಲವನ್ನು ಆಳುತ್ತಾರೆ.ನಮಗಿಂತ ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಅರ್ಧ ಶತಮಾನದ ಹಿಂದೆ ಇದ್ದಕ್ಕಿಂತ ಹತ್ತು ಪಟ್ಟು ಹೆಚ್ಚಿದ್ದಾರೆ.ಯುದ್ಧಗಳು ಕೊಲ್ಲುವುದಕ್ಕಿಂತ ಹೆಚ್ಚು ಜನರನ್ನು ಅವರು ಕೊಲ್ಲುತ್ತಾರೆ, ಆದರೆ ಯಾರೂ ಈ ಕೊಲೆಗಳನ್ನು ಟೀಕಿಸುವುದಿಲ್ಲ. ಪತ್ರಿಕೆಗಳು, ಚಾನೆಲ್ಗಳು ಕೂಡ..ಅವರು ನಮ್ಮ ದಾರಿಗಳನ್ನು ಕದ್ದರು, ನಮ್ಮ ಗಾಳಿಯನ್ನು ಕದ್ದರು. `ನಾನು ಡ್ರೈವ್ ಮಾಡ್ತೀನಿ' ಅಂದಾಗ ಅವರು ನಕ್ಕರು.

*****
ಸಂದರ್ಶನ:

http://www.washingtonpost.com/wp-dyn/content/audio/2009/06/05/AU2009060502941.html

ಬೊಗಸೆ ತುಂಬಾ ನೋವ ಹೂವು

ನೆನಪುಗಳು ಬೇಕು
ನಡೆಯುವುದ ನಿಲ್ಲಿಸಿ
ನಿರಾಳವಾಗಲು.
ಚಿಂತೆಯಾಗಿ, ಚಿತೆಯಾಗಿ ಕಾಡಿ
ಕೊನೇ ಪಕ್ಷ
ಸಾವಿಗೆ ಶರಣಾಗಲು.
ಇವು `ನೆನಪುಗಳು ಬೇಕು' ಪದ್ಯದ ಸಾಲುಗಳು. ಇದೇ ರೀತಿಯ ಭಾವತೀವ್ರತೆಯ ದಟ್ಟ ಅನುಭವ, ಜಾತ್ರೆಯ ಮುದಿಮರ, ತಾಲ್ ಸೆ ತಾಲ್ ಮಿಲಾ, ಸಹಾರಾದ ಮರಳು, ಹಳ್ಳಿಯ ಚಿತ್ರಗಳೆಲ್ಲವೂ ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಅವರ `ಶರೀಫನ ಬೊಗಸೆ'ಯಲ್ಲಿವೆ. ಇವರ ಕವಿತೆಗಳನ್ನು ಓದುವುದೇ ಖುಷಿ. ಇಲ್ಲಿ ಕಾಣುವ ಆಪ್ತ ಪ್ರತಿಮೆಗಳು ನಮ್ಮನ್ನು ಸೆಳೆಯುತ್ತವೆ. `ಶರೀಫನ ಬೊಗಸೆ'ಯಲ್ಲಿ ಅನೇಕ ಅನುಭವಗಳನ್ನು ತುಂಬಿಕೊಂಡು ಕವಿ ಮನಸ್ಸುಗಳ ಮಧ್ಯೆ ನಿಂತವರು ಮಲ್ಲಿಕಾರ್ಜುನ. ಆ ಬೊಗಸೆ ತುಂಬಾ ನಮ್ಮನ್ನು ಕಾಡುವ ಚಿತ್ರಗಳಿವೆ. ಪಾತ್ರಗಳಿವೆ. ಕಳೆದುಕೊಂಡು ಪಡೆಯುವುದೇ ಹೆಚ್ಚಂತೆ. ಹಾಗಾದರೆ ಈ ಕವಿ ಪಡೆದುಕೊಂಡದ್ದು ಏನು? ಎಂಬ ಪ್ರಶ್ನೆಗೆ ಇವರ ಪ್ರತಿ ಪದ್ಯದ ಸಾಲುಗಳೇ ಉತ್ತರವಾಗಿ ನಿಲ್ಲುತ್ತವೆ. ಕವಿತೆಗಳನ್ನು ಅಕ್ಷರಗಳಲ್ಲಿ ಮೊಗೆಯದೇ, ಅಂತಾರಾತ್ಮದ ಚಿಲುಮೆ ಮುಂದೆ ಬೊಗಸೆ ಒಡ್ಡಿ ನಿಂತಿರುವ ಕಾವ್ಯಧ್ಯಾನ ಅವರ ಕವನಗಳಲ್ಲಿದೆ. ಸದ್ಯ ರಾಣೆಬೆನ್ನೂರು ಸಮೀಪದ ಸುಣಕಲ್ ಬಿದರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದು ಬೊಗಸೆ ಕವಿತೆಯೊಂದಿಗೆ ಬರುವವರಿದ್ದಾರೆ. ಇದೇ ನೆಪದಲ್ಲಿ ಮಾತಿನ ಮೊಗೆತ..
ನೀವು ಕವಿಯಾಗಿದ್ದು ಹೇಗೆ? ಕವಿತೆಯೊಂದಿಗೆ ಸಂಬಂಧ ಬೆಳೆದದ್ದು ಯಾವಾಗ?
ನಾನು ಪಿಯುಸಿ ಫೇಲಾಗಿ ಮನೆಯಲ್ಲಿದ್ದಾಗ. ಅಣ್ಣ ಬಸವರಾಜ್ ಅಂಗಡಿ ವ್ಯಾಪಾರ ಮಾಡ್ತಾನೇ ಮಾರ್ಕ್ಸ್, ಏಂಗೆಲ್ಸ್, ಷೇಕ್ಸ್ ಪಿಯರ್ ಅಂತೆಲ್ಲಾ ಓದ್ತಾ ಇದ್ದ. ಕಾದಂಬರಿ ಬರೆಯೋದು, ನಾಟಕ ಆಡೋದು ಮಾಡ್ತಿದ್ದ. ಮೊದಲಿನಿಂದಲೂ ಒಂಟಿತನ ಅಂದ್ರೆ ನಂಗಿಷ್ಟ. ಹೊಲ ತಿರುಗೋದು, ಜೀರಂಗಿ ಹಿಡಿಯೋದು, ಮಾಡ್ತಾನೆ ಬೆಳಿತಿದ್ದವನಿಗೆ ಅಣ್ಣನ ಮಾತು, ಚರ್ಚೆ, ಸಾಹಿತ್ಯದ ಪುಸ್ತಕಗಳು ಆಸಕ್ತಿ ಹುಟ್ಟಿಸಿದವು. ಅಷ್ಟೊತ್ತಿಗಾಗಲೇ ಊರಲ್ಲಿ ಗ್ರಾಮಪಂಚಾಯ್ತಿ ರಾಜಕೀಯವಾಗಿ ಬಲವಾಗ್ತಿದ್ದವು. ವ್ಯವಸಾಯ ಮಾಡ್ತಲೇ ರಾಜಕೀಯದಲ್ಲಿ ತಲೆ ಹಾಕುತ್ತಿದ್ದ ಅಪ್ಪ, ಆತನ ಮೂಲಕ ಮನೆ ತನಕ, ಮನದ ತನಕ ನುಗ್ಗಿ ಬರುತ್ತಿದ್ದ ಸಮಸ್ಯೆಗಳು, ಜನರ ಕಷ್ಟಗಳು ನನ್ನನ್ನು ಕಲಕುತ್ತಿದ್ದವು. ಅನ್ಯಾಯಗಳನ್ನು ಪ್ರಶ್ನಿಸಿ, ಅಸಹಾಯಕನಾಗಿ ಒದ್ದಾಡೋದು, ಅವಮಾನ ಅನುಭವಿಸೋದು ಮನೆಯೊಳಗಿನ ಕಷ್ಟಗಳನ್ನು, ಜಗಳಗಳನ್ನೆಲ್ಲಾ ತಲೆಗೆ ತುಂಬಿಕೊಂಡು, ಒಬ್ಬನೇ ಅಳೋದು, ಹೀಗೆ ಆಗ್ತಿದ್ದಾಗ ಯಾಕೋ ಏನನ್ನೋ ಬರೆಯಬೇಕೆನಿಸಿತು. ಕತೆ ಬರ್ಯೋಕೆ ಪ್ರಯತ್ನ ಮಾಡಿದೆ. ಆಗ್ಲಿಲ್ಲ. ಪದ್ಯ ಬರೆದೆ. ಇಂಥದ್ದೇ... ಕಾಲ ಕಾಲಕ್ಕೆ ಕಾಡುವ ನೋವುಗಳು... ಕವಿತೆಗಳು..

ಫ್ಯಾಷನ್ ಟೀವಿ, ರೆಹಮಾನ್ ಹಾಡು, ಸೆಪ್ಟೆಂಬರ್ 11, ಹಿಂದಿ ಹಾಡು ಇಂಥ ಹಲವು ಚಿತ್ರಗಳು ನಿಮ್ಮ ಪದ್ಯಗಳಲ್ಲಿವೆ. ಇವು ಯಾವುದಕ್ಕೆ ಸಂವಾದಿಯಾಗಿ ನಿಮ್ಮ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತವೆ?
ಅಮೆರಿಕಕ್ಕೆ ನೆಗಡಿ ಬಂದರೂ ಸಾಕು ಅದೊಂದು ದೊಡ್ಡ ಸುದ್ದಿ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಅಮೆರಿಕ, ಬಿನ್ ಲಾಡೆನ್ ಮಹಾ ವಿಲನ್ ಅಂತೆಲ್ಲಾ ಮಾತು. ಅದರಾಚೆಗಿನ ಸೂಕ್ಷ್ಮಗಳ ಬಗ್ಗೆ ಮಾತಾಡೋರು ಯಾರೋ ಕೆಲವರು. ಸೆಪ್ಟೆಂಬರ್ 11ರ ಘಟನೆ ಟೀವಿ, ಪತ್ರಿಕೆಗಳನ್ನು ಆವರಿಸಿಕೊಂಡಾಗ ನನ್ನನ್ನು ತೀವ್ರವಾಗಿ ಕಾಡಲಾರಂಭಿಸಿತು. ಅದರ ಬಗ್ಗೆ ಏನು ಮಾತಾಡುವುದಕ್ಕೂ ಗೊಂದಲವಾಗುತ್ತಿತ್ತು. ಅಂಥ ಅನುಭವವನ್ನು ಕವಿತೆ ಮಾಡಿದೆ. ಇನ್ನು ನೀವು ಪ್ರಸ್ತಾಪಿಸುತ್ತಿರುವ ಹಳ್ಳಿ ಅನುಭವ, ರೆಹಮಾನ್ ಸಂಗೀತ, ಫ್ಯಾಶನ್ ಟೀವಿ, ಎಂಟೀವಿ ಚಿತ್ರಗಳನ್ನು ಕಾವ್ಯದಲ್ಲಿ ತಂದಿದ್ದೀನಿ. ಅವುಗಳನ್ನು ಯಾಕ್ ತಂದಿದ್ದೀನಿ ಅನ್ನೋದನ್ನು ಒಬ್ಬ ಓದುಗ ಹೇಳಿದ್ರೆ ಚೆನ್ನಾಗಿರುತ್ತೆ. ಆ ಕವಿತೆಯಲ್ಲಿ ಹೊರನೋಟಕ್ಕೆ ತುಂಬಾ ಆಕರ್ಷಕವಾಗಿ ಕಾಣುವ ಮನೆಯೊಳಗಿನ ಸಮಸ್ಯೆಗಳು, ಅವುಗಳ ನಡುವೆ ಸಂಭ್ರಮಗಳಿಲ್ಲದೆ ಒದ್ದಾಡ್ತಾ ಇರೋ ಯುವಕ ತತ್ಕಾಲದ ಬಿಡುಗಡೆಗಾದ್ರೂ ಆಥರದ ಚಾನೆಲ್ಗಳಲ್ಲಿ ಲೀನವಾಗುವ ಮನಸ್ಥಿತಿ, ಇವುಗಳಿಗೆ ಸಂವಾದಿಯಾಗಿ ಆ ಚಿತ್ರಗಳನ್ನು ತಂದಿದ್ದೀನಷ್ಟೆ.

ನಿಮ್ಮ ಕವಿತೆಗಳಲ್ಲಿ ಕಾಣುವ, ಕಾಡುವ `ಅಪ್ಪ'ನ ಬಗ್ಗೆ ಹೇಳಿ...
ಚಿಕ್ಕವನಿದ್ದಾಗ ಪ್ರತಿ ರಾತ್ರಿ ಅಪ್ಪನ ಜೊತೇನೇ ನಾನು ಮಲಗ್ತಾ ಇದ್ದಿದ್ದು, ನನ್ನೆಲ್ಲಾ ನೋವು, ಸಂಕಟಗಳಿಗೆ, ಸುಖ ಸಂಭ್ರಮಗಳಿಗೆ ಯಾವಾಗ್ಲೂ ಸಾಕ್ಷಿಯಾಗುತ್ತಾ ಇದ್ದಿದ್ದು ಅಪ್ಪ (ಕರಿಬಸವನಗೌಡ). ಊರಲ್ಲಿ ನಡೆಯುವ ಅನ್ಯಾಯಗಳನ್ನು ಅವಡುಗಚ್ಚಿ ಪ್ರಶ್ನಿಸಿ, ಕೋರ್ಟು, ಕಚೇರಿ ಅಂತೆಲ್ಲಾ ಅಲೆದು, ದುಗುಡದಲ್ಲಿದ್ದಾಗ್ಲೂ, ನಮ್ಮ ಹೊಟ್ಟೆ ಹಸಿದ್ಹಂಗೆ ನೋಡಿಕೊಳ್ತಿದ್ದ. ನಾನು ದೊಡ್ಡವನಾಗ್ತಾ, ನನ್ನಲ್ಲೂ ಹೊಸ ರೀತಿಯ ರಾಜಕೀಯ ಪ್ರಶ್ನೆ ಮೂಡುತ್ತಿದ್ದಾಗ ಅಪ್ಪ ಒಮ್ಮೆ ಸರಿಯಾಗಿ ಕಂಡ್ರೆ ಮತ್ತೊಮ್ಮೆ ನಿಗೂಢವಾಗ್ತಿದ್ದ. ಊರಿನ ರಾಡಿನೆಲ್ಲಾ ಮೈಮೇಲೆ ಸುರ್ಕೊಂಡು, ಒದ್ದಾಡ್ತಿರೋ ಅಪ್ಪನ ಜತೆಗೆ ಅಮ್ಮನ ನಿತ್ಯ ತಕರಾರುಗಳು ಕೆಲವೊಮ್ಮೆ ಸರಿ ಅನ್ನಿಸದರೆ, ಹಲವು ಬಾರಿ ಅಪ್ಪನೇ ಸರಿ ಕಾಣಿಸ್ತಿದ್ದ. ಅಪ್ಪನ ಒಳಹೊರಗುಗಳು ಅರ್ಥ ಮಾಡಿಕೊಳ್ತಾನೇ, ನನ್ನ ಸುತ್ತಲ ಘಟನೆಗಳನ್ನು ನೋಡ್ಲಿಕ್ಕೆ ಶುರು ಮಾಡಿದೆ. ನನ್ನ ಓದಿಗೆ ಕಾಲ ಬದುಕಿರೋಲ್ಲ, ಅಂತ್ಹೇಳಿ, ಸಣ್ಣ ಮುಖ ಮಾಡಿಕೊಂಡಾಗೆಲೆಲ್ಲಾ ಭಾರವಾಗ್ತಿದ್ದ ಎದೆ ಆತನೆಡೆ ಸೆಳೆತವನ್ನು ಮತ್ತೂ ಜಾಸ್ತಿ ಮಾಡ್ತು. ಅಪ್ಪನಾಗಿ ಜೊತೆಗಿದ್ದು ಕೊಂಡೆ, ಹೊಲವನ್ನು, ಜೀರಂಗಿಯನ್ನು ಊರನ್ನ, ಅಲ್ಲಿನ ನೋವುಗಳನ್ನು ಅನ್ಯಾಯಗಳನ್ನು ರಾಜಕೀಯವನ್ನು ಎಲ್ಲ ತೋರಿಸಿದವನು ಅಪ್ಪ. ಹಾಗಾಗಿ ಕಾವ್ಯದಲ್ಲೂ ಕಾಡ್ತಾನೆ....

ನಿಮಗೆ ಯಾವಾಗ್ಲಾದ್ರೂ ಭಾವಗೀತೆ ಬರಿಬೇಕು ಅಂತಾ ಅನ್ಸುತ್ತಾ..?
ತನುವು ನಿನ್ನದು ಮನವು ನಿನ್ನದು.. ನೀ ಹಿಂಗ ನೋಡಬ್ಯಾಡ, ಅಳುವ ಕಡಿಲಿನಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರ ಇಂಥ ಭಾವಗೀತೆಗಳನ್ನು ಕೇಳಿ ಸುಖಿಸ್ತೀನಿ. ಜಯಂತ್ ಸಿನಿಮಾಕ್ಕೆ ಬರಿತಿರೋ ಹಾಡುಗಳನ್ನು ಕೇಳಿಯೂ ಸಂತೋಷ ಪಡ್ತೀನಿ ಅಂತಾ ಪ್ರಯತ್ನ ಮಾಡ್ಬೇಕು ಅಂತಾ ನನಗಂತೂ ಆಗಾಗ ಅನ್ನಿಸುತ್ತೆ. ಆದರೆ ನಮ್ಮನ್ನು ತಲೆ ತಿನ್ನೋವು ಇವತ್ತಿನ ವಿಷಯಗಳೇ. ಅಪ್ರಾಮಾಣಿಕ ರಾಜಕೀಯ, ನೆರೆಪೀಡಿತರ ನೋವು, ಹುಸಿ ದೇಶಾಭಿಮಾನ, ಸಾಮಾನ್ಯನ ಅಸಹಾಯಕತೆ, ವೈಯಕ್ತಿಕ ಸಂಘರ್ಷಗಳು...

ಇಂದಿನ ಕವಿಯ ಮುಂದಿನ ಸವಾಲು..
ಜನಸಾಮಾನ್ಯರ ಬದುಕಿರುವ ಪ್ರತಿಯೊಂದು ಸವಾಲುಗಳೇ ಇವತ್ತಿನ ಕವಿಗಿರುವ ಸವಾಲು ಅಂತಾ ಭಾವಿಸಿದ್ದೀನಿ... ಬದಲಾಗಿರೋ ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶದ ಈ ಹೊತ್ತಿನಲ್ಲಿ, ವ್ಯಕ್ತಿ ಮತ್ತು ಸಾಮಾಜಿಕ ಬದುಕಿನ ಒಳಸೂಕ್ಷ್ಮಗಳನ್ನ, ವ್ಯಕ್ತಿ ಮತ್ತು ಪ್ರಕೃತಿಯ ಸಂಬಂಧದ ಅಂತರಲಯಗಳನ್ನ, ಆಳವಾಗಿ ಗ್ರಹಿಸಿ ಬರೀಬೇಕು ನಾವೆಲ್ಲ. ನಮ್ಮ ಭಾಷೆ, ನುಡಿಗಟ್ಟು, ಕಾವ್ಯದ ಆಕೃತಿ, ನಮ್ಮ ಸಾಹಿತ್ಯ ಪರಂಪರೆಯಿಂದ ಶಕ್ತಿ ಪಡೆದುಕೊಳ್ತಾ ಹೊಸದಾಗಬೇಕು. ಹೊಸ ತಲೆಮಾರಿನ ನನ್ನ ಸ್ನೇಹಿತರನೇಕರಿಗೆ ಖಂಡಿತ ಈ ಶ್ರದ್ಧೆ ಇದೆ.

ನಿಮ್ಮನ್ನು ಕಾಡುವ ಕವಿ...
ಕಾವ್ಯದ ಸಮ್ಮೋಹಕತೆಯಲ್ಲಿ ಬೇಂದ್ರೆ, ಬಂಧದಲ್ಲಿ ಅಡಿಗ, ವೈಚಾರಿಕತೆಯಲ್ಲಿ ಕುವೆಂಪು. ಒಬ್ಬ ಕವಿಯನ್ನು ಗುರುತಿಸುವುದು ಕಷ್ಟ. ಆದರೆ ಇವತ್ತಿಗೂ ಕಾವ್ಯವನ್ನು ಅತಿ ಹೆಚ್ಚು ಪ್ರೀತಿಸ್ತೀನಿ ಅಂದ್ರೆ, ಅಲ್ಲಮನಿಂದಾಗಿ...

*****

ಹಗಲ ಕತ್ತಲಲಿ ನಕ್ಷತ್ರ ನಗುವುದಿಲ್ಲ

ರಾತ್ರಿಯೆಂದರೆ ಕತ್ತಲಲ್ಲ

****

ಗುಡಿಗುಂಡಾರಗಳಿಗೆ

ಕತ್ತಿಮಸೆವ

ಅಡಿಗಲ್ಲುಗಳೇ

ಬನ್ನಿ

ನಿಮ್ಮೆಲ್ಲರಿಗೆ

ಅಲ್ಲಮನ ಬಯಲು ತೋರುವೆ

****

ಲೆಕ್ಕಿಲ್ಲ, ಬುಕ್ಕಿಲ್ಲ

ಬ್ಯಾಂಕ್ನಾಗ್ ಖಾತಿಲ್ಲ

ನರ್ನ್ಯಾಗ್ ಬರೀ ಸೊನ್ನಿ ಬರೀತೀವಿ ರೀ

ಹುಡುಗೂರುಪ್ಡೀ ಕಳಿಸಿ

ತಂಗಳನ್ನ ಬೇಡೀಸಿ

ತುತ್ ತಿಂದು ಹೊತ್ತನ್ನ ನೂಕ್ತೀವಿ ರೀ

ಹಳ್ಳಿಯ ಜನ ನಾವು..

(ಬೊಗಸೆಯಿಂದ ತೆಗೆದ ಸಾಲುಗಳು)

`ಉರ್ದು ಕವಿ ಸಾಹಿರ್ ಹೇಳಿದ ಹಾಗೆ `ಗಮ್ ಔರ್ ಭಿ ಹೈ, ದುನಿಯಾಮೆ ಮೊಹಬ್ಬತ್ ಕೆ ಸಿವಾ'. ನಿಮ್ಮ ಕವಿತೆಗಳು ಲೈಂಗಿಕತೆಯನ್ನೇ ಬಂಡವಾಳ ಮಾಡಿಕೊಳ್ಳದೆ ಲೋಕದ ಎಲ್ಲಾ ದಂದುಗಗಳ ಬಗ್ಗೆ ಕಾಳಜಿ ಹೊಂದಿ ವಿಶೇಷವಾದ ವ್ಯಾಪಕತೆ ಪಡೆದುಕೊಂಡಿವೆ...' ಹೀಗಂತ ಎಚ್.ಎಸ್.ಶಿವಪ್ರಕಾಶ್ ಆರಿಫ್ ರಾಜಾರ ಮೊದಲ ಸಂಕಲನದಲ್ಲಿ ಬರೆದಿದ್ದಾರೆ.ತೀವ್ರ, ಆದ್ರ್ರ, ಭಾವಪೂರ್ಣ, ಮಾನವೀಯ ಕವಿತೆಗಳನ್ನು `ಜಂಗಮ ಫಕೀರನ ಜೋಳಿಗೆ' ತುಂಬ ತುಂಬಿಕೊಂಡು ನಮ್ಮ ನಡುವೆ ನಿಂತಿರುವ ಕವಿ ಆರಿಫ್ ರಾಜಾ. ರಾಯಚೂರು ಸಮೀಪದ ಗ್ರಾಮವೊಂದರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಾ ಮಗುವಿನ ಬೆರಗು ಕಣ್ಣನ್ನು, ಗಾಢವಾದ ಭಾವ ಹೊಂದಿದ ಕವಿ.ಸಂಕಲನ ಮೊದಲನೆಯದ್ದೇ ಆದರೂ ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಕವಿತೆಗಳು ಇದರಲ್ಲಿವೆ, ಸಾಕಷ್ಟು ಮೆಚ್ಚಿಸಿಕೊಂಡಿವೆ. ಬಹುಮಾನ, ಅಭಿಮಾನಗಳನ್ನು ಪಡೆದುಕೊಂಡಿವೆ. ಬದುಕು-ಬರಹ `ಜೀವವಿರೋಧಿ'ಯಾಗಬಾರದೆಂದು ಹಂಬಲಿಸುವ ಈ ಕವಿಯ ಮಾತಿನ ಜೋಳಿಗೆ ಬಿಚ್ಚಿಸಿ ಕೂತಾಗ...
ನೀವು ಕವಿತೆಯ ಕೈ ಹಿಡಿದಿರಾ? ಅಥವಾ ಕವಿತೆ ನಿಮ್ಮನ್ನು ಮಡಿಲಿಗೆ ಹಾಕಿಕೊಂಡಿತಾ?
keep a green tree in your heart, singing bird will surely come ಅಂತಾ ಒಂದು ಚೀನಿ ಗಾದೆ. ನನ್ನದೇ ಕವಿತೆಯ ಸಾಲುಗಳಲ್ಲಿ ಹೇಳುವುದಾದರೆ,
ನಾನಾಗ ಕವಿತೆ ಬರೆಯುತ್ತಿದ್ದೆ
ಕವಿತೆ ನನ್ನಿಂದ ಬರೆಯಿಸಿಕೊಳ್ಳುತ್ತಿದೆ.
ಕವಿತೆಯ ಸಖ್ಯ ಯಾಕೆ ಬೇಕು?
ನೀವು ಕೇಳಿದ ಪ್ರಶ್ನೆಯಷ್ಟೇ ನೇರವಾಗಿ, ಸರಳವಾಗಿ ಉತ್ತರಿಸುವುದು ಕಷ್ಟ. ಜಗದ ಮೊದಲ ಹಾಡು ಹೇಗೆ ಹುಟ್ಟಿತು? ಗುಡ್ಡ ಗಾಡುಗಳಲ್ಲಿ ಬೇಟೆಯಾಡಿಕೊಂಡು, ತನ್ನಷ್ಟಕ್ಕೆ ತಾನಿದ್ದ ಮನುಷ್ಯ ಗುಹೆಗಳಲ್ಲಿ ಯಾಕೆ ಚಿತ್ರ ಬರೆಯುವ ಸಾಹಸ ಮಾಡಿದ? ಇದನ್ನು ಸೃಜನಶೀಲತೆ ಎಂದು ಯಾಕೆ ಕರೆದೆವು? ಗುರುತರವಾದ ಬೆರಗೊಂದು ಕಾಲನ ಕೈಯಿಂದ ಜಾರಿ ಶಾಶ್ವತ ನೆನಪಾಗುಳಿಯುವುದನ್ನು ಮನುಷ್ಯ ಸಹಿಸಲಾರ ಎನಿಸುತ್ತದೆ. ಅದಕ್ಕೆ ಈ ಕಲೆ ಕವಿತೆ. ಹಾಗಾಗಿ ಈ ಪ್ರಶ್ನೆಗೆ ಸಾಮುದಾಯಿಕ ನೆಲೆಯಲ್ಲೇ ಉತ್ತರ ಹುಡುಕಬೇಕು ಅನ್ನಿಸುತ್ತೆ.
ಸಾತ್ವಿಕ ಆಕ್ರೋಶ, ಬಿಸಿ ರಕ್ತದ ಸಿಡುಕು, ಅದಮ್ಯ ಪ್ರೇಮ ನಿಮ್ಮ ಕವಿತೆಯಲ್ಲಿವೆ. ಕಾವ್ಯ ಖಡ್ಗ ಆಗಬೇಕು ಅನ್ನಿಸುತ್ತಾ? ತತ್ವದ ಬೆಳಕಾಗಬೇಕು ಅನ್ನಿಸುತ್ತಾ?
ನಾನೊಬ್ಬ ಮನುಷ್ಯ ಎಂದ ಮೇಲೆ ಎಲ್ಲರ ಹಾಗೆ ಬಲ-ಬಲಹೀನತೆಗಳು ಸಹಜವಾಗಿ ನನ್ನ ಬರವಣಿಗೆಯಲ್ಲಿ ಬರಬೇಕು. ಸಂಕೀರ್ಣ ಸನ್ನಿವೇಶದಲ್ಲಿ ಮಾನವ ವರ್ತನೆಯನ್ನು ಇದು ತಪ್ಪು-ಸರಿ, ಇದು ಹಿಂಸೆ, ಇದು ಅಹಿಂಸೆ, ನೈತಿಕ-ಅನೈತಿಕ ಎಂದು ಕಪ್ಪು -ಬಿಳುಪಾಗಿ ವಿಶ್ಲೇಷಣೆ ಮಾಡಲು ಆಗುವುದಿಲ್ಲ. ಖಡ್ಗಕ್ಕೊಂದು ತಾತ್ವಿಕತೆ ಇಲ್ಲ ಅನ್ನುತ್ತೀರಾ?
ಮಂದಿರ, ಮಸೀದಿ, ಬದಲು ತಾಜ್ಮಹಲ್ ಕಟ್ಟಬೇಕೆನ್ನುತ್ತೀರಿ. ನಿಮ್ಮ ಕವಿತೆಗಳಲ್ಲಿ ಹೀಗೆ ಕಾಣಿಸಿಕೊಳ್ಳುವ ಪ್ರೇಮ ಎಂಥದ್ದು ಅನ್ನೋ ಕುತುಹೂಲ..
ಹೌದು, ತಾಜ್ಮಹಲ್ ಕಟ್ಟಬೇಕು. ಯಾರದ್ದೋ ಗೋರಿಯ ಮೇಲಲ್ಲ. ಸಂಬಂಧಗಳಲ್ಲಿ ಸೌಹಾರ್ದತೆಯನ್ನು ಬೆಳೆಸುವ ಸೇತುವೆಯಾಗಿ. ನನ್ನ ಕವಿತೆಗಳಲ್ಲಿ ಕಾಣುವ ಪ್ರೇಮ ಅಂದರೆ ಜೀವನ ಪ್ರೇಮ, ಯಾವ ದೇಶದಲ್ಲೇ ಆಗಲಿ, ಯಾವ ಕಾಲದಲ್ಲೇ ಆಗಲಿ ಇದೊಂದು ಮಾತ್ರ ಅವಮಾನವೀಯವಾಗಿರಲು ಸಾಧ್ಯವಿಲ್ಲವಲ್ಲ. ಅಂಥ ಪ್ರೇಮ ಇಲ್ಲಿದೆ. ಸಾಂಸ್ಕೃತಿಕ ಚಹರೆಗಳು, ಈ ವಿಷಯದಲ್ಲಿ ಕೇವಲ ಹೊರಹೊದಿಕೆಗಳು ಮಾತ್ರ...
ನಿಮ್ಮ ಕವಿತೆಗಳಲ್ಲಿ ನಿಮಗೆ ಇಷ್ಟವಾದ ಸಾಲುಗಳು
..ಜಂಗಮ ಫಕೀರನ ಜೋಳಿಗೆ ಪದ್ಯದ...
ನಿನ್ನ ಯುಗಾದಿಯ ಬೇವು ಬೆಲ್ಲ
ನನ್ನ ರಮ್ಜಾನಿನ ದೂದ್ ಖುರ್ಮಾ
ಎಂದೂ ಒಂದಾಗುವುದಿಲ್ಲ.
ಈ ಹುಡುಗರಿಗೆ ಮತ್ತೆ
ರಕ್ತದಲ್ಲಿ ಪ್ರೇಮಪತ್ರ ಬರೆವ ಹುಚ್ಚು
ನಿಮ್ಮನ್ನು ಪ್ರಭಾವಿಸಿದ್ದು ಯಾರು?
ಎಚ್.ಎಸ್. ಶಿವಪ್ರಕಾಶ್. ಮಾದರಿಗಳೇ ಇಲ್ಲದ ಹೊತ್ತಲ್ಲಿ ಹೊಸ ನಡೆ ಕಂಡುಕೊಂಡವರು, ದೊಡ್ಡ ಸಾಧನೆ ಮಾಡಿದವರು ಶಿವಪ್ರಕಾಶ್. ಹಾಗೆಯೇ ಭಿನ್ನ ನೆಲೆಯಲ್ಲಿ ನಡೆದ ಎಸ್.ಮಂಜುನಾಥ್.
ನಿಮ್ಮ ವಾರಿಗೆಯ ಕವಿಗಳ ಬಗ್ಗೆ ಹೇಳಿ..
ಖುಷಿ ಇದೆ. ಇವತ್ತಿನ ಬರಹಗಾರರು ತಮ್ಮ ಮಿತಿಯೊಳಗೆ ಪ್ರಾಮಾಣಿಕವಾಗಿದ್ದಾರೆ. ಮೈಗೆ ಬೆಂಕಿ ಹಚ್ಚಿಕೊಂಡು ಬರೆಯುತ್ತಾರೆ. ರಕ್ತ ಸುಟ್ಟುಕೊಳ್ಳುತ್ತಾರೆ. ಇಂಥವರು ಎಂದು ಹೆಸರು ಹೇಳುವುದರಲ್ಲೇನಿದೆ. ನಿಜವಾದ ಓದುಗನಿಗೆ ಅವರ್ಯಾರು ಗೊತ್ತಾಗುತ್ತೆ..
ವಾರಿಗೆಯ ಕವಿಗಳಲ್ಲಿ ನೀವು ಸ್ನೇಹಿತನಾಗಿ ಏನನ್ನಾದರೂ ಹೇಳಿಕೊಳ್ಳಲೇಬೇಕು ಅನ್ನಿಸಿದ ಸಂಗತಿ..
ನಾವೆಲ್ಲಾ ಮಾತಿಗಿಂತಲೂ ಕ್ರಿಯೆ ಮುಖ್ಯ ಅನ್ನೋ ಎಚ್ಚರ ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು. ಬರಹಗಾರನಿಗೆ ಮುದ್ರಣ, ದೃಶ್ಯ ಮಾಧ್ಯಗಳಲ್ಲಿ ಇಂದು ತುಂಬಾ ಅವಕಾಶಗಳಿವೆ. ಯಾವುದೇ ಅವಕಾಶ ಲೇಖಕನನ್ನು ಬೆಳೆಸಬೇಕು. ಆದರೆ ಅವನನ್ನು ಅವಕಾಶವಾದಿಯನ್ನಾಗಿ ಮಾಡಿ ವಾಚಾಳಿಯಾಗಿಸಬಾರದು. ಇಂಥ ಅವಕಾಶಗಳ ಬಗ್ಗೆ ಎಚ್ಚರವಹಿಸಬೇಕು ಎನ್ನುವುದು ನನ್ನ ಭಿನ್ನಹ.
ಮತ್ತೇನು ಬರೆಯಬೇಕೆಂದಿದ್ದೀರಿ?
ನಾಟಕ ಬರೀಬೇಕು ಅಂತಿದ್ದೀನಿ. ನಾವು ಮುಖ್ಯವಾಹಿನಿ ಅಂದುಕೊಂಡ ಪಠ್ಯಗಳಲ್ಲಿ ದಾಖಲಾಗದೆ ಉಳಿದ ಪ್ರತಿ ಇತಿಹಾಸ, ಹಾಲು ಜೇನಿನಂತೆ ಬೆರೆತು ಹೋಗಿದ್ದ ಸೂಫಿ-ಶರಣ ತತ್ವಗಳು, ಮೊನ್ನೆ ತಾನೇ ರಾಜಧಾನಿಯಲ್ಲಿ 60 ಸಾವಿರ ಭಿಕ್ಷುಕರನ್ನು ಪ್ರಾಣಿಗಳಂತೆ ಹೊರಹಾಕಿದ್ದು, ದಿಲ್ಲಿ ಬಜಾರು, ದಿಲ್ಲಿ ದರ್ಬಾರು ಇದೆಲ್ಲವೂ ನಾಟಕದಲ್ಲಿ ಇರುತ್ತವೆ..

ಮಹಾತ್ಮ

ಮಹಾತ್ಮ

ಹುಡುಕೋಕೆ..

ಲೋಡ್ ಆಗುತ್ತಿದೆ...

About this blog


ಒಳಗೂ.. ಹೊರಗೂ ಎಂದ ಮೇಲೆ ಇನ್ನೇನು ಹೇಳಬೇಕು. ಹೊರಗಿನಿಂದಕ್ಕೆ ಸ್ಪಂದಿಸುವ ಒಳಗನ್ನೂ.. ಒಳಗಿನ ಮಾತನ್ನು ಕೇಳುತ್ತಾ ಹೊರಗಿನ ಜೊತೆ ನಡೆಯುವುದನ್ನೂ. ಮಾಡುತ್ತಲೇ ಇರುತ್ತೇವೆ. ತಪ್ಪು ಸರಿಗಳ ವಿವೇಚನೆ ಗೊತ್ತಿದ್ದು, ಗೊತ್ತಿಲ್ಲದೆ, ಕಲಿತು, ಮರೆತು ಬದುಕುತ್ತಲೇ ಇರುತ್ತೇವೆ. ಅವುಗಳ ಬಗ್ಗೆ ಒಮ್ಮೆ ಸಮಾಧಾನಕ್ಕೆ, ಖುಷಿಗೆ, ಓದಿದವರು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ, ಬರೆಯುವ ಮತ್ತು ಓದುವ ಕಾಲದಲ್ಲೇ ಹೊಳೆದು ಬಿಡಬಹುದಾದ ಸಂಗತಿಗಳಿಗಾಗಿ.. ಬರೆಯುವ ಹಟ ಮತ್ತು ಚಟ.ಥೇಟ್ ಕೆರೆ-ದಡದ ಆಟ. ನೆಟ್ಟಿರಲಿ ಇಲ್ಲಿ ನಿಮ್ಮ ನೋಟ....

ಬ್ಲಾಗ್ ಆರ್ಕೈವ್